ಪ್ರೀತಿಮಯ ತಂದೆಯೇ, ನಿಮ್ಮ ಧರ್ಮಸಭೆಯನ್ನು ಪ್ರೀತಿಯಿಂದ ಮುನ್ನಡೆಸಿದ ನಿಮ್ಮ ಸೇವಕರಾದ ವಿಶ್ವಗುರು ಬೆನೆಡಿಕ್ಟ್ ರವರ ಪರವಾಗಿ ಭಕ್ತರ ಪ್ರಾರ್ಥನೆಗಳನ್ನು ಆಲಿಸಿರಿ. ನಿಮ್ಮ ಕರುಣೆಯಿಂದ, ನಿಮ್ಮ ನಿಷ್ಠಾವಂತ ಸೇವಕರಿಗೆ ನಿತ್ಯಸೌಭಾಗ್ಯದ ಕೃಪೆಗೆ ಸ್ವಾಗತಿಸಿರಿ. ಅವರು ನಿಮ್ಮ ಪ್ರೀತಿಯ ಮತ್ತು ಕ್ಷಮೆಯ ರಹಸ್ಯಗಳನ್ನು ನಿಷ್ಠೆಯಿಂದ ಈ ಭುವಿಯಲ್ಲಿ ಅನುಸರಿಸಿದರು. ಸ್ವರ್ಗದಲ್ಲಿಯೂ ನಿಮ್ಮೊಂದಿಗೆ ಎಂದೆಂದಿಗೂ ಆನಂದಿಸಲಿ. ನಿಮ್ಮ ಪ್ರೀತಿಯ ಕಾಳಜಿಯಲ್ಲಿ, ನೀವು ಧರ್ಮಸಭೆಗೆ ನಿಮ್ಮ ಸೇವಕನನ್ನು ಬೋಧಕರನ್ನಾಗಿ ಮಾಡಿದ್ದೀರಿ. ಅವರು ಭುವಿಯ ಮೇಲೆ ಕ್ರಿಸ್ತರ ಕೆಲಸವನ್ನು ಮಾಡಿದರು. ನಿಮ್ಮ ಪುತ್ರ ಪ್ರಭುಯೇಸು ತಮ್ಮ ಶಾಶ್ವತ ವೈಭವಕ್ಕೆ ಅವರನ್ನು ಸ್ವಾಗತಿಸಿ, ನಿತ್ಯ ವಿಶ್ರಾಂತಿಯನ್ನು ಕರುಣಿಸಲಿ. ಈ ಭುವಿಯಲ್ಲಿ ನಿಮ್ಮ ಶಾಂತಿ ಮತ್ತು ಪ್ರೀತಿಯ ಸಾಧನವಾಗಿದ್ದ ನಿಮ್ಮ ಸೇವಕರನ್ನು, ನಿಮ್ಮ ದಯೆಯ ಆಲಿಂಗನಕ್ಕೆ ವಿಶ್ವಾಸದಿಂದ ಒಪ್ಪಿಸುತ್ತೇವೆ. ನಿಮ್ಮ ವರದಾನದ ನಿಮಿತ್ತ ಸಕಲ ಸಂತರೊಂದಿಗೆ ಸಂಭ್ರಮಿಸುವ ಸೌಭಾಗ್ಯವನ್ನು ಅವರಿಗೆ ಕರುಣಿಸಿರಿ. ನಿಮ್ಮ ಪುತ್ರ ಪ್ರಭು ಯೇಸುಕಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್

Home | About Us | Sitemap | Contact Us

Copyright ©2019 - www.shimogadiocese.org. Powered by eCreators

Contact Us

Bishop's House
Malligenahalli
Sagar Road
Shimoga- 577 205
KARNATAKA - INDIA