ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ಸಂತ ವಿನ್ಸೆಂಟ್ ದ ಪೌಲ್ ಸೊಸೈಟಿ ಹಾಗು ರೋಟರಿ ರಕ್ತನಿಧಿ, ಶಿವಮೊಗ್ಗ ವತಿಯಿಂದ ರಕ್ತದಾನ ಶಿಬಿರ ಹಾಗು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಅ. ೨: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಭಾನುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಸಂತ ವಿನ್ಸೆಂಟ್ ದ ಪೌಲ್ ಸೊಸೈಟಿ ಹಾಗು ರೋಟರಿ ರಕ್ತನಿಧಿ, ಶಿವಮೊಗ್ಗ ವತಿಯಿಂದ ರಕ್ತದಾನ ಶಿಬಿರ ಹಾಗು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
    ದೇವಾಲಯದ ಧರ್ಮಗುರು ಫಾದರ್ ಲಾನ್ಸಿ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಯೋಜನೆಗಳು ಹಾಗು ಸದ್ಬಳಕೆ ಮಾಡಿಕೊಳ್ಳುವ ಬಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿನೋದ್ ಇಲಾಖೆಯಲ್ಲಿನ ಯೋಜನೆಗಳು ಹಾಗು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಅಶ್ವಿತಾ ಕ್ರಾಸ್ಟ, ಆರೋಗ್ಯ ಇಲಾಖೆಯಲ್ಲಿನ ಯೋಜನೆಗಳ ಕುರಿತು ಹಾಗು ರಕ್ತದಾನ ಶಿಬಿರದ ಮೇಲ್ವಿಚಾರಕ ಡಾ. ಅರುಣ್ ರಕ್ತದ ಮಹತ್ವ ಮತ್ತು ರಕ್ತದಾನ ಮಾಡುವವರು ಹೊಂದಿರಬೇಕಾದ ಸಾಮಾನ್ಯ ತಿಳುವಳಿಕೆಗಳ ಕುರಿತು ಮಾಹಿತಿ ನೀಡಿದರು. ದೇವಾಲಯದ ಪಾಲನ ಸಮಿತಿ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಆಲ್ವಿನ್ ಕಾಸ್ಟ ಸ್ವಾಗತಿಸಿದರು. ಸೆಂಟ್ ಚಾರ್ಲ್ಸ್ ಸುಪಿರೀಯರ್ ಸಿಸ್ಟರ್ ಜೆನಿಟಾ ವಂದಿಸಿದರು.