ದಿನಾಂಕ:12-12-2021 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ, ಸೇಕ್ರೆಡ್ ಹಾರ್ಟ್, ಪ್ರಧಾನಾಲಯದ ಆವರಣದಲ್ಲಿರುವ ನಿರ್ಮಲಾ ಸೇವಾಕೇಂದ್ರದ ಸಭಾಂಗಣದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಮಹಿಳಾ ಆಯೋಗದ ವತಿಯಿಂದ ಕಾರ್ಮೆಲ್ ವಲಯದ ಮಹಿಳೆಯರಿಗಾಗಿ ಕ್ರಿಸ್ಮಸ್ ಆಚರಣೆ ಹಾಗೂ ಹೊಸವರ್ಷವನ್ನು ಸ್ವಾಗತಿಸಲು "ಕ್ರಿಸ್ಮಸ್ ಟ್ರೀ" ಎಂಬ ಶೀರ್ಷಿಕೆಯುಳ್ಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕ್ರಿಸ್ಮಸ್ ಗಾಯನ ಸ್ಪರ್ಧೆ ಹಾಗೂ" ಕಿರು ಸಮುದಾಯ ಮತ್ತು ಸಿನೋದ್" ನ ಬಗ್ಗೆ ನನ್ನ ಅಭಿಪ್ರಾಯ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಎರಡೂ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿಯ ವಿವಿಧ ಧರ್ಮಕೇಂದ್ರದ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಆಯೋಗದ ಅಧ್ಯಕ್ಷರಾದ ಸಿಸ್ಟರ್ ಎಲೀಜ್ ರವರು ವಹಿಸಿದ್ದರು. ವಂದನೀಯ ಗುರುಗಳಾದ ಫಾದರ್ ಜೇಸು ಆರ್ ನಾಥನ್ ರವರು ಕ್ರಿಸ್ಮಸ್ ಸಂದೇಶ ನೀಡಿ ಎಲ್ಲರಿಗೂ ಶುಭ ಹಾರೈಸಿದರು. ಫಾದರ್ ಡುಮ್ಮಿoಗ್ ಡಯಾಸ್ ರವರು ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಿದರು. ಸೈಂಟ್ ಚಾರ್ಲ್ಸ್ ಕಾನ್ವೆಂಟ್ ನ ಸುಪಿರಿಯರ್ ಸಿಸ್ಟರ್ ಪ್ರಮೀಳಾ ಅಲ್ಮೇಡಾ ರವರು ತೀರ್ಪುಗಾರರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಶ್ರೀಮತಿ ಕ್ರಿಸ್ಟಿನಾ ಶೀಲಾ ಹಾಗೂ ಶ್ರೀಮತಿ ಅನ್ನಾ ಡೇವಿಸ್ ರವರು ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಮಹಿಳಾ ಆಯೋಗದ ಸದಸ್ಯರಾದ ಶ್ರೀ ಅಂತೋನಿ ವಿಲ್ಸನ್ ಮತ್ತು ಶ್ರೀಮತಿ ನಿರ್ಮಲಾ ಜೋಸ್ಪಿನ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.